ಜಿಲ್ಲಾ ಪಂಚಾಯತ್ ದಕ್ಷಿಣ ಕನ್ನಡ

ಗ್ರಾ. ಅ. ಪಂ. ರಾ. ಇಲಾಖೆ, ಕರ್ನಾಟಕ ಸರ್ಕಾರ

Back
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ

ದೃಷ್ಟಿಕೋನ

ಯುವಜನ ಸೇವೆ ಮತ್ತು ಕ್ರೀಡಾಇಲಾಖೆಯು 1969-70 ರಲ್ಲಿಯುವ ಜನತೆಯ ಸಮಗ್ರ ಅಭಿವೃದ್ದಿಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಅಸ್ತಿತ್ವಕ್ಕೆ ಬಂದಿತು. 2012-13 ರಲ್ಲಿ ಕರ್ನಾಟಕ ಕ್ರೀಡಾನೀತಿಯ ಶಿಫಾರಸ್ಸಿನಂತೆ ಯುವಸಬಲೀಕರಣ ಮತ್ತು ಕ್ರೀಡಾಇಲಾಖೆ ಎಂದು ಮರುನಾಮಕರಣಗೊಂಡಿತು.ದೇಶದಲ್ಲಿ ಯುವಸಬಲೀಕರಣ ಚಟುವಟಿಕೆಗಳನ್ನು ಸಕ್ರಿಯವಾಗಿ ಅನುಷ್ಠಾನಗೊಳಿಸುತ್ತಿರುವ ರಾಜ್ಯಗಳಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ. ಗ್ರಾಮೀಣ ಮತ್ತು ನಗರ ಪ್ರದೇಶದ ಯುವಜನತೆ, ವಿದ್ಯಾರ್ಥಿ ಮತ್ತು ವಿದ್ಯಾರ್ಥಿಯೇತರ ಯುವಜನತೆಗೆ ಅವಶ್ಯಕವಿರುವ ಸಾಮಾಜಿಕ, ಆರ್ಥಿಕ, ಕ್ರೀಡಾ ಮತ್ತು ಸಾಂಸ್ಕೃತಿಕ ಅಭಿವೃದ್ಧಿಗಾಗಿ ಸರ್ಕಾರವು ಜಾರಿಗೆ ತರುವ ವಿವಿಧ ಯೋಜನೆಗಳನ್ನು ಯುವಸಬಲೀಕರಣ ಮತ್ತು ಕ್ರೀಡಾಇಲಾಖೆಯ ಮೂಲಕ ಅನುಷ್ಟಾನಗೊಳಿಸಲಾಗುತ್ತಿದೆ. ಕ್ರೀಡಾ ತರಬೇತಿಗೆ ಅವಶ್ಯಕವಿರುವ ಮೂಲಭೂತಸೌಕರ್ಯಗಳನ್ನು ಒದಗಿಸುವಲ್ಲಿಇಲಾಖೆಯುಶ್ರಮಿಸುತ್ತಿದೆ.

 

ಧ್ಯೇಯ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರು ನಗರದ ಲೇಡಿಹಿಲ್ಬಳಿ ಸುಮಾರು 19.15 ಎಕರೆ ಪ್ರದೇಶದ ವ್ಯಾಪ್ತಿಯಲ್ಲಿರುವ ಜಿಲ್ಲಾಕ್ರೀಡಾಂಗಣವು ಮಂಗಳಾ ಹೊರಾಂಗಣ ಕ್ರೀಡಾಂಗಣ, ಸಿಂಥೆಟಿಕ್ಟ್ರ್ಯಾಕ್, ಜಿಲ್ಲಾ ಕ್ರೀಡಾ ವಸತಿ ನಿಲಯ, ಸ್ಕೇಟಿಂಗ್ರಿಂಕ್, ಬಾಸ್ಕೆಟ್ಬಾಲ್ಅಂಕಣ, ಯು.ಎಸ್.ಮಲ್ಯ ಒಳಾಂಗಣ ಕ್ರೀಡಾಂಗಣ ಹಾಗೂ ಕರಾವಳಿ ಉತ್ಸವ ಮೈದಾನಗಳನ್ನು ಒಳಗೊಂಡಿರುತ್ತದೆ.ಇದರ ನಿರ್ವಹಣೆಗಾಗಿ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಕ್ರೀಡಾಂಗಣ ಸಮಿತಿಯನ್ನು ರಚಿಸಲಾಗಿದೆ. ಕೆಲವು ತಾಲ್ಲೂಕು ಕೇಂದ್ರಗಳಲ್ಲಿ ಈಗಾಗಲೇ ತಾಲ್ಲೂಕು ಕ್ರೀಡಾಂಗಣಗಳನ್ನು ಅಭಿವೃದ್ಧಿಪಡಿಸಲಾಗಿದೆ.ಕೆಲವು ತಾಲ್ಲೂಕು ಕೇಂದ್ರಗಳಲ್ಲಿ ಕ್ರೀಡಾಂಗಣ ನಿರ್ಮಾಣಕ್ಕಾಗಿ ಜಾಗಗಳನ್ನು ಗುರುತಿಸಲಾಗಿದೆ.

 

ಇಲಾಖೆಯ ವತಿಯಿಂದ ಜಿಲ್ಲಾ ಕ್ರೀಡಾವಸತಿ ನಿಲಯವನ್ನು ನಿರ್ವಹಣೆ ಮಾಡಲಾಗುತ್ತಿದ್ದು, ಇಲ್ಲಿ 5 ರಿಂದ 10ನೇ ತರಗತಿಯವರೆಗಿನಗರಿಷ್ಠ 50 ಮಕ್ಕಳಿಗೆ ಅಥ್ಲೆಟಿಕ್ಸ್ಮತ್ತು ವಾಲಿಬಾಲ್ಕ್ರೀಡೆಯಲ್ಲಿ ತರಬೇತಿಯನ್ನು ನೀಡಲು ಅನುಮೋದನೆ ದೊರೆತಿರುತ್ತದೆ. ಪ್ರಸ್ತುತ 17 ಕ್ರೀಡಾಪಟುಗಳು ಅಥ್ಲೆಟಿ ಕ್ಸ್ಕ್ರೀಡೆಯಲ್ಲಿ ತರಬೇತಿಯನ್ನು ಪಡೆಯುತ್ತಿರುತ್ತಾರೆ.ಇಲ್ಲಿ ಕ್ರೀಡಾಪಟುಗಳಿಗೆ ಉಚಿತಪೌಷ್ಠಿಕ ಆಹಾರ, ವಸತಿ, ಕ್ರೀಡಾಗಂಟು, ನುರಿತ ತರಬೇತುದಾರರಿಂದ ವೈಜ್ಞಾನಿಕ ಕ್ರೀಡಾತರಬೇತಿಯನ್ನು ನೀಡಲಾಗುತ್ತಿದೆ.

 ಉದ್ದೇಶ 

ಗ್ರಾಮೀಣ ಮತ್ತು ನಗರ ಪ್ರದೇಶದ ಯುವಜನತೆ, ವಿದ್ಯಾರ್ಥಿ ಮತ್ತು ವಿದ್ಯಾರ್ಥಿಯೇತರ ಯುವಜನತೆಗೆ ಅವಶ್ಯಕವಿರುವ ಸಾಮಾಜಿಕ, ಆರ್ಥಿಕ, ಕ್ರೀಡಾ ಮತ್ತು ಸಾಂಸ್ಕೃತಿಕ ಅಭಿವೃದ್ಧಿಗಾಗಿ ಸರ್ಕಾರವು ಜಾರಿಗೆ ತರುವ ವಿವಿಧ ಯೋಜನೆಗಳನ್ನು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮೂಲಕ ಅನುಷ್ಟಾನಗೊಳಿಸಲಾಗುತ್ತಿದೆ. ಕ್ರೀಡಾ ತರಬೇತಿಗೆ ಅವಶ್ಯಕವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಇಲಾಖೆಯು ಶ್ರಮಿಸುತ್ತಿದೆ.

 

ಸಂಪರ್ಕಿಸಿ :


ಕಛೇರಿವಿಳಾಸ:           

ಯುವ ಸಬಲೀಕರಣ ಮತ್ತು ಕ್ರೀಡಾಇಲಾಖೆ,

ಮಂಗಳಾ ಕ್ರೀಡಾಂಗಣ, ಗಾಂಧಿನಗರ,

 ಮಂಗಳೂರು, ದಕ್ಷಿಣಕನ್ನಡ ಜಿಲ್ಲೆ-575003.

 

ದೂರವಾಣಿಸಂಖ್ಯೆ: 0824-2451264

ಇ-ಮೇಲ್ವಿಳಾಸ:     adyssdk@yahoo.com

×
ABOUT DULT ORGANISATIONAL STRUCTURE PROJECTS